ಪ್ರವಾದಿ ಮುಹಮ್ಮದ್(ಸ)ರ ಸಂದೇಶ

0
360_F_528866602_aiVwnOnkooTrqo3MgicCf83SVVzt1Gnd

ಪಕ್ಷಪಾತಿ ಮುಸ್ಲಿಮೇತರ ವಿಮರ್ಶಕರು ಮಾತ್ರವಲ್ಲ, ಆಕ್ರಮಣಕಾರಿಗಳಾದ, ದುರಾಸೆಯುಳ್ಳ ಭೌತಿಕವಾದಿ ಮುಸ್ಲಿಮರು ಸಹ ಪ್ರವಾದಿ ಮುಹಮ್ಮದ್(ಸ) ಅವರ ಪಾತ್ರವನ್ನು ತಪ್ಪಾಗಿ ಪ್ರತಿನಿಧಿಸುತ್ತಾರೆ. ತಮ್ಮ ಖಾಸಗಿ ಜೀವನದಲ್ಲಿ ಪ್ರವಾದಿಯವರು ಉನ್ನತ ಚಾರಿತ್ರ‍್ಯ, ಸಮಾನತೆ ಮತ್ತು ಪರೋಪಕಾರದ ವ್ಯಕ್ತಿಯಾಗಿ ಮಿಂಚಿದರು. ಕಾಯಕದ ಮಹತ್ವವನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಅವರು ಅತ್ಯಂತ ಸರಳ ಜೀವನವನ್ನು ನಡೆಸಿದರು, ಅನಂತರದ ಜೀವನದಲ್ಲಿ ಅವರು ತನ್ನಲ್ಲಿ, ಸಕಲ ಮಾನವ ಕುಲಕ್ಕೆ ಮತ್ತು ವಿಶೇಷತಃ ಅರೇಬಿಯಾದ ಜನರ ಮೇಲೆ ಒಂದು ಕಾರ್ಯ ಅರ್ಪಿತವಾಗಿದೆ ಎಂದು ಭಾವಿಸಿದರು. ತಮ್ಮ ಹೊಣೆ ನಿರ್ವಹಣೆಗೆ ಸಿದ್ಧರಾದರು ಮತ್ತು ತಮ್ಮ ಜೀವಿತಾವಧಿಯಲ್ಲೇ ಅದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾದರು. ಅವರ ಜೀವಿತಾವಧಿಯಲ್ಲಿ ಅರೇಬಿಯಾದ ಜನರನ್ನು ತನ್ನ ಧರ್ಮಾಧಾರಿತ ರಾಜಕೀಯ ಸಿದ್ಧಾಂತದ ಮೂಲಕ ಸಮನ್ವಯ ಗೊಳಿಸಲು ಪ್ರಯತ್ನಿಸಿದರು ಹಾಗೂ ಅವರು ಜಾಗತಿಕ ಸಾಂಸ್ಕೃತಿಕ ಶಕ್ತಿಯಾಗಬೇಕಾದ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಸಲು ಸಾಧ್ಯವಾಯಿತು.

ಅರಬ್ಬರಲ್ಲಿ ಜ್ಞಾನದ ದಾಹವನ್ನು ತುಂಬಿದರು. ಕೇವಲ ಡೇರೆಗಳು ಮತ್ತು ಮರುಭೂಮಿಗಳಾಗಿದ್ದ ಹಿಂದುಳಿದ ಪ್ರದೇಶವಾದ ಅರೇಬಿಯಾವು ಕ್ಷಿಪ್ರಗತಿಯಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಯುರೇಷಿಯಾದ ಅದೃಷ್ಟ ಪ್ರಾಂತ್ಯವಾಯಿತು. ಆ ನಾಲ್ಕು ಶತಮಾನಗಳು ಬೌದ್ಧಿಕ, ವಾಣಿಜ್ಯೋದ್ಯಮ ಹಾಗೂ ಪ್ರಬಲ ಅಂತಾರಾಷ್ಟ್ರೀಯ ಸಂಬಂಧಗಳ ಸಂಸ್ಥಾನವಾಯಿತು. ಇದು ಇಸ್ಲಾಮೀ ಚಿಂತನೆಯ ಸಾರ್ವತ್ರಿಕ ಆಧ್ಯಾತ್ಮಿಕ ಪ್ರಭಾವದ ಕಾಲಘಟ್ಟವಾಗಿತ್ತು. ಈ ಸಂದೇಶಗಳ ಬೌದ್ಧಿಕ ಮತ್ತು ವೈಜ್ಞಾನಿಕ ಹಿರಿಮೆ ಮುಸ್ಲಿಮ್ ಜನಮಾನಸದಲ್ಲಿ ಎದ್ದು ಕಾಣುತ್ತಿತ್ತು. ಇದು ಅವರಿಗೆ ಅಪಾರ ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಜಿಜ್ಞಾಸೆಯನ್ನು ಮೂಡಿಸಿತು. ಇದು ಅವರಲ್ಲಿ ಸಮಕಾಲೀನ ಭಾರತೀಯ ಸಂಸ್ಕೃತಿ, ಚೀನೀ ಸಂಸ್ಕೃತಿ ಮತ್ತು ಗ್ರೀಕೋ-ರೋಮನ್ ಸಂಸ್ಕೃತಿ ಮುಂತಾದುವುಗಳನ್ನು ತಿಳಿಯಲು ಪ್ರೇರೇಪಿಸಿತು. ಆ ಅಧ್ಯಯನಗಳು ವಿಜ್ಞಾನ, ತತ್ವಶಾಸ್ತ್ರ ಮತ್ತು ಕಲೆಯಲ್ಲಿ ವೈವಿಧ್ಯಮಯ ಸಾಧನೆ ತೋರಲು ಅವರನ್ನು ಉತ್ತೇಜಿಸಿದವು. ಆದರೆ ಏಸುಕ್ರಿಸ್ತರ ಬಳಿಕ 13ನೇ ಶತಮಾನದಲ್ಲಿ ಮಂಗೋಲ್ ಆಕ್ರಮಣ ಮತ್ತು 1258ರಲ್ಲಿ ಬಾಗ್ದಾದ್ ಸಂಪೂರ್ಣ ನಾಶವಾದ ನಂತರ, ಲಕ್ಷಾಂತರ ಮಂದಿ ಕೊಲ್ಲಲ್ಪಟ್ಟರು. ವಿಶಾಲವಾದ ಭೂಭಾಗವು ನಿರ್ಜನ ಮತ್ತು ಬಂಜರು ಪ್ರದೇಶವಾಯಿತು. ಎರಡು ಶತಮಾನಗಳ ಕಾಲ ಈಜಿಪ್ಟ್ ಮತ್ತು ಸ್ಪೇನ್‌ನಲ್ಲಿ ಅರೇಬಿಕ್ ಸಂಸ್ಕೃತಿಯನ್ನು ಉಳಿಸಿಕೊಂಡು, ಇಸ್ಲಾಮೀ ಜಗತ್ತಿನ ಕೇಂದ್ರವನ್ನು ರಾಜಕೀಯ ಸಂಸ್ಕಾರ ಇಲ್ಲದ ಜನರಿಗೆ ಹಸ್ತಾಂತರಿಸಲಾಯಿತು.

ಇದರಿಂದಾಗಿ ನಿರಂತರತೆಯಿಂದ ಕೂಡಿದ್ದ ಸಾರ್ವತ್ರಿಕ ಮತ್ತು ಸಂವೇದನಾಶೀಲ ಹಂತಗಳು ನಿಧಾನವಾಗಿ ಅವನತಿಯ ಜಾಡನ್ನು ಹಿಡಿದವು, ಒಣ ವಿಚಾರ ಮತ್ತು ಅಸಹಿಷ್ಣುತೆಯ ಅಭಿವ್ಯಕ್ತಿಗಳ ಆಧಿಪತ್ಯವು ಆರೋಹಣವನ್ನು ಕಂಡಿತು. ಮಂಗೋಲರು, ಆನಂತರ ತುರ್ಕರು ಇಸ್ಲಾಂ ಧರ್ಮಕ್ಕೆ ಶೀಘ್ರದಲ್ಲೇ ಮತಾಂತರಗೊಂಡು ಇಸ್ಲಾಂ ಧರ್ಮ, ಸಂಸ್ಕೃತಿ ಮತ್ತು ರಾಜಕೀಯ ಶಕ್ತಿಯ ವಾಹಕರಾದರು. ಇತರರನ್ನು ಹೊರತುಪಡಿಸಿ ಈ ಹೊಸ ಮುಸ್ಲಿಮ್ ಗುಂಪುಗಳು ಇಸ್ಲಾಮಿನ ವೈಚಾರಿಕತೆ ಮತ್ತು ಸಾರ್ವತ್ರಿಕತೆಗಿಂತಲೂ ಸೈದ್ಧಾಂತಿಕತೆ ಹಾಗೂ ಅಸಹಿಷ್ಣುತೆಯ ತೆಕ್ಕೆಗೆ ಬಿದ್ದಿದ್ದವು. ಇಸ್ಲಾಮಿನ ಹೆಸರನ್ನು ಬಳಸಿಕೊಂಡು, ಅನೇಕ ಆಕ್ರಮಣಕಾರಿ ಸೇನಾ ಗುಂಪುಗಳು ಹೇರಳವಾಗಿ ಇತರ ದೇಶಗಳು ಮತ್ತು ಸಂಸ್ಕೃತಿಗಳನ್ನು ನಾಶಪಡಿಸಲು ಮತ್ತು ಲೂಟಿ ಮಾಡಲು ಕಾರಣವಾಗಿವೆ. ಇದು ಈ ಮಹಾನ್ ಧರ್ಮದ ಅಪಖ್ಯಾತಿಗೆ ಕಾರಣವಾಯಿತು.

About The Author

Leave a Reply

Your email address will not be published. Required fields are marked *