ಭಾಗ 2 – ಗಣಿತಶಾಸ್ತ್ರದ ದೇವಶಾಸ್ತ್ರ
ಲೇಖಕರು – ಅಮೀನ್ ಅಹ್ಸಾನ್
ಇಮಾಮ್ ಗಝ್ಝಾಲಿ ಮತ್ತು ಗಣಿತಶಾಸ್ತ್ರ
ಗಣಿತಶಾಸ್ತ್ರದ ಕುರಿತು ಹೆಚ್ಚು ಚರ್ಚೆ ನಡೆಸಿದ ದೊಡ್ಡ ಇತಿಹಾಸ ಇಸ್ಲಾಮಿಗಿದೆ. ಎಂಟನೇ ಶತಮಾನದಿಂದ ಹದಿಮೂರನೇ ಶತಮಾನದವರೆಗಿನ ಇಸ್ಲಾಮಿನ ಸುವರ್ಣ ಯುಗದಲ್ಲಿ ಮುಸ್ಲಿಮ್ ವಿದ್ವಾಂಸರ ಪ್ರಾಯೋಗಿಕ ಕೊಡುಗೆಗಳನ್ನು ಹೆಚ್ಚಾಗಿ ಚರ್ಚಿಸಲಾಗುತ್ತದೆಯಾದರೂ (ಶಾಸ್ತ್ರೀಯ ಗಣಿತಶಾಸ್ತ್ರದ ಪರಿಕಲ್ಪನೆಗಳನ್ನು ಅನುವಾದಗೊಳಿಸಿ, ಸಂರಕ್ಷಿಸಿ ಮತ್ತು ಪ್ರಚಾರಗೊಳಿಸಿದ Algebra, Trigonometry, Geometry ಮತ್ತು Cubic Equations ಸಾಧನೆಗಳವರೆಗೆ) ಗಣಿತಶಾಸ್ತ್ರವನ್ನು ತತ್ವಶಾಸ್ತ್ರ ಮತ್ತು ದೇವಶಾಸ್ತ್ರದ ನಡುವೆ ಜೋಡಿಸಲ್ಪಟ್ಟ ಪರಸ್ಪರ ಕ್ರಿಯೆಗಳನ್ನು ವಿರಳವಾಗಿ ಚರ್ಚಿಸಲ್ಪಡುತ್ತಿಲ್ಲ.
ಇಸ್ಲಾಮಿಕ್ ದೇವಶಾಸ್ತ್ರದಲ್ಲಿ (علم الكلام) ಸೃಷ್ಟಿಕರ್ತ, ವಿಶ್ವ ಮತ್ತು ಮಾನವ ಸೃಷ್ಟಿಯ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಒಂದು ಪ್ರಮುಖ ವಿಷಯವಾಗಿದೆ. ಈ ಆಯಾಮದಲ್ಲಿ, ಇಸ್ಲಾಮಿಕ್ ಚಿಂತಕರು ದೈವಿಕ ಕ್ರಮ ಮತ್ತು ಅದರ ಪರಿಪೂರ್ಣತೆಯನ್ನು ಅರ್ಥಮಾಡಿಕೊಳ್ಳಲು (ಸಂಖ್ಯೆಗಳು, ಸಮೀಕರಣಗಳು ಮತ್ತು ಜ್ಯಾಮಿತೀಯ ಅನುಕ್ರಮಗಳನ್ನು, ಶ್ರೇಣಿಗಳನ್ನು ಉಪಯೋಗಿಸಿ) ಗಣಿತಶಾಸ್ತ್ರವನ್ನು ಬಳಸುವುದನ್ನು ಕಾಣಬಹುದು.
ಅಲ್-ಕಿಂದಿ ಮತ್ತು ಅಲ್-ಫರಾಬಿಯಂತಹ ತತ್ವಜ್ಞಾನಿಗಳು ಗಣಿತದ ನಿಯಮಗಳನ್ನು ಲೌಕಿಕವಾಗಿ ಮತ್ತು ಅಸ್ತಿತ್ವದ ಸ್ವರೂಪದೊಂದಿಗೆ ಜೋಡಿಸಿರುವುದು ಸಂಖ್ಯೆಗಳನ್ನು ತಿಳಿಯುವುದರೊಂದಿಗೆ ಸೃಷ್ಟಿಕರ್ತನನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ವಾದಿಸಿದವರು. ಇಬ್ನ್ ರುಶ್ದ್, ಇಬ್ನ್ ಸಿನಾ ಮತ್ತು ಇಮಾಮ್ ಗಝ್ಝಾಲಿ ಮೊದಲಾದವರು ಈ ಚರ್ಚೆಗಳಲ್ಲಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿದವರಾಗಿದ್ದಾರೆ.

ಅಮೆರಿಕನ್ ಖಗೋಳ ಭೌತಶಾಸ್ತ್ರಜ್ಞ ಮತ್ತು ಲೇಖಕ ನೀಲ್ ಡಿಗ್ರಾಸ್ ಟೈಸನ್, ಇಸ್ಲಾಮ್ ಧರ್ಮದ ಸುವರ್ಣ ಯುಗದ ಅವನತಿಯನ್ನು ಉಲ್ಲೇಖಿಸುತ್ತಾ, “ಇಮಾಮ್ ಗಝ್ಝಾಲಿ ಗಣಿತ ಮತ್ತು ವಿಜ್ಞಾನವನ್ನು ಪಿಶಾಚಿಯ (ಸೈತಾನ) ಕೆಲಸವೆಂದು ಬಣ್ಣಿಸಿದ್ದಾರೆ ಮತ್ತು ಇಮಾಮ್ ಗಝ್ಝಾಲಿ ಇಸ್ಲಾಮಿಕ್ ಜಗತ್ತನ್ನು ವೈಜ್ಞಾನಿಕ ಪ್ರಗತಿಯಿಂದ ತಡೆದಿದ್ದಾರೆ” ಎಂದು ಹೇಳಿಕೊಂಡಿದ್ದಾರೆ. ಇದರ ವಿರುದ್ಧ ಅನೇಕ ಇತಿಹಾಸಕಾರರು ಮತ್ತು ವಿದ್ವಾಂಸರು ಧ್ವನಿಯೆತ್ತಿ, ಇಮಾಮ್ ಗಝ್ಝಾಲಿಯವರ ಮಾತುಗಳನ್ನು ವಿರೂಪಗೊಳಿಸಲಾಗಿದೆ ಮತ್ತು ಸುಳ್ಳು ಇತಿಹಾಸವನ್ನು ಬರೆಯಲಾಗುತ್ತಿದೆ ಎಂದು ಸೂಚಿಸಿದ್ದಾರೆ. ಆದರೆ, ಇಮಾಮ್ ಗಝ್ಝಾಲಿಯವರ ಬರಹಗಳನ್ನು ಪರಿಶೀಲಿಸುವಾಗ, ಅವರನ್ನು ವೈಜ್ಞಾನಿಕ ಸಂಪ್ರದಾಯದ ಶತ್ರು ಮತ್ತು ವಿಜ್ಞಾನ ವಿರೋಧಿ ಎಂದು ಚಿತ್ರಿಸಲು ಕಾರಣ, ಅವರು ವಿಜ್ಞಾನ ಮತ್ತು ಗಣಿತದ ಅಧಿಕಾರವನ್ನು ಪ್ರಶ್ನಿಸಿದ್ದರೆಂದು ಅವರ ಮಾತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದರೆ ಕಾಣಬಹುದು. ಬಹಳ ಸೂಕ್ಷ್ಮವಾಗಿ ನೋಡಿದರೆ ಅವರು ಗಣಿತವನ್ನು ನಿರಾಕರಿಸುತ್ತಾರೆ ಎಂದು ನಮಗೆ ಕಾಣುವುದಿಲ್ಲ. ಅದಲ್ಲದೆ, ಅವರು ಪ್ರಾಯೋಗಿಕ ಪರಿಭಾಷೆಯಲ್ಲಿ ಗಣಿತದ ಅಗತ್ಯವನ್ನು ಮತ್ತು ಅದು ಒದಗಿಸುವ ಖಚಿತತೆಯನ್ನು(Certainty) ಗೌರವಿಸುತ್ತಾರೆ. ಆದರೆ, ಇಸ್ಲಾಮಿಕ್ ನಂಬಿಕೆಯಲ್ಲಿ (ದೇವಶಾಸ್ತ್ರ) ಅಂತಹ ತಾರ್ಕಿಕ ಅಂಶಗಳನ್ನು ಪ್ರಾಯೋಗಿಕಗೊಳಿಸುವುದನ್ನು ಅವರು ಟೀಕಿಸುತ್ತಾರೆ.
ಇಮಾಮ್ ಗಝ್ಝಾಲಿಯವರು ತನ್ನ ಕುರ್ಆನ್ ಲಾಜಿಕ್ಗಳನ್ನು ವಿವರಿಸುವ ಸಂದರ್ಭವನ್ನು ಪರಿಶೀಲಿಸಿದಾಗ ಇದಕ್ಕೆ ಒಂದು ಉದಾಹರಣೆಯನ್ನು ಕಾಣಬಹುದು. ಅವರು ತಮ್ಮ ಅಲ್-ಕಿಸ್ತಾಸ್ ಅಲ್-ಮುಸ್ತಕೀಮ್ (القسطاس المستقيم) ಎಂಬ ಪುಸ್ತಕದಲ್ಲಿ ಕುರ್ಆನಿನ ಐದು ತರ್ಕಗಳನ್ನು ಬಳಸಿಕೊಂಡು ಆಳವಾಗಿ ಅರ್ಥಮಾಡಿಕೊಳ್ಳಬಹುದು ಎಂದು ವಾದಿಸುತ್ತಾರೆ: ಒಂದು تعاند (ವಿರೋಧಾಭಾಸ) ಎರಡು تلازم (ಸಮಾನತೆ), ಮತ್ತು تعادل (ಸಂತುಲಿತವಸ್ಥೆ)ನ ಮೂರು ಅವಸ್ಥೆಗಳು, تعادل اصغر (ಸಣ್ಣ ಸಂತುಲಿತಾವಸ್ಥೆ) تعادل الأوسط (ಮಧ್ಯಮ ಸಂತುಲಿತಾವಸ್ಥೆ) تعادل اكبر ( ದೊಡ್ಡ ಸಂತುಲಿತಾವಸ್ಥೆ) ಇವುಗಳನ್ನು ಬಳಸಿಕೊಂಡು, ಅವರು ಕುರ್ಆನನ್ನು ಜ್ಞಾನದ ಮೂಲವಾಗಿ ಮತ್ತು ಸತ್ಯವನ್ನು ಬಹಿರಂಗಪಡಿಸುವ ಪ್ರಕ್ರಿಯೆಯಾಗಿ ಪ್ರಸ್ತುತಪಡಿಸುತ್ತಾರೆ. ಆದರೆ ಅವರ ಕುರ್ಆನ್ ಲಾಜಿಕುಗಳನ್ನು ಗ್ರೀಕ್ ತರ್ಕದಿಂದ ಪ್ರತ್ಯೇಕಿಸುವುದು ಅಲ್ಲಾಹನ ಸಾರ್ವಭೌಮತ್ವವಾಗಿದೆ. ಅಂದರೆ, ಗ್ರೀಕ್ ಲಾಜಿಕನ್ನು ಅಧಿಕಾರವಾಗಿ ಕಾಣುವ ಮೂಲಕ ಕುರ್ಆನ್ನ ಪದಗಳನ್ನು ಪರೀಕ್ಷಿಸುವ ಬದಲು, ಕುರ್ಆನ್ನ ಸತ್ಯಗಳನ್ನು ತನ್ನದೇ ಆದ ಲಾಜಿಕುಗಳ ಆಧಾರವಾಗಿ ಇಮಾಮ್ ಗಝ್ಝಾಲಿ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಗ್ರೀಕ್ ತರ್ಕವನ್ನು ಅಧಿಕಾರವಾಗಿ ನೋಡಿ ದಿವ್ಯ ತತ್ವವನ್ನು ಪರೀಕ್ಷಿಸುವುದನ್ನು ಪೈಶಾಚಿಕ ಕ್ರಿಯೆ (ಸೈತಾನ ತರ್ಕ) ಎಂದು ಅವರು ಪರಿಚಯಿಸುತ್ತಾರೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಗಣಿತಶಾಸ್ತ್ರ (ಲಾಜಿಕ್, ರೀಸನಿಂಗ್) ಅಥವಾ ಅದರ ಆಧಾರದ ಮೇಲೆ ಆಧಾರಿತವಾದ ವೈಜ್ಞಾನಿಕ ವಿಷಯಗಳನ್ನು ದೇವತಾಶಾಸ್ತ್ರದ ಮೇಲೆ ಬಿಟ್ಟು ಬಿಡಲು ಅವರು ಅನುಮತಿಸಲಿಲ್ಲ. ಇದಲ್ಲದೆ, ಅವುಗಳನ್ನು ದೇವತಾಶಾಸ್ತ್ರದ ಸನಿಹಕ್ಕೆ ತಂದರೆ ದೇವತಾಶಾಸ್ತ್ರವು ದುರ್ಬಲಗೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿಯುತ್ತಾರೆ. ಇಮಾಮ್ ಗಝ್ಝಾಲಿ ಗಣಿತಶಾಸ್ತ್ರವನ್ನು ಯಾವ ಕಾರಣಕ್ಕೆ ನಿರುತ್ಸಾಹಗೊಳಿಸಿದರೋ ಅದೇ ಕಾರಣವನ್ನು ಪೋಪ್ ಬೆನೆಡಿಕ್ಟ್ ಅವರು ದೇವತಾಶಾಸ್ತ್ರದ ಊರ್ಜಿತಗೊಳಿಸುವಿಕೆಗೆ ಯುಕ್ತಿಯನ್ನು ಸ್ವೀಕರಿಸಲು ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಂಡವರಲ್ಲಿ ನಮಗೆ ಕಾಣಲು ಸಾಧ್ಯವಿದೆ.
ಕನ್ನಾಡಾನುವಾದ: ಅಶೀರುದ್ದೀನ್ ಆಲಿಯಾ
ಕೃಪೆ: Campussalive.com(ಮಲೆಯಾಳಂ)