ನಾವು ಪ್ರೀತಿಸುವುದಕ್ಕಿಂತ ಮೊದಲು ಅಲ್ಲಾಹನು ನಮ್ಮನ್ನು ಪ್ರೀತಿಸುತ್ತಾನೆ

0
ratio3x2_960

ಲೇಖಕರು: ಅಬ್ದುಸ್ಸಲಾಮ್. ಪಿ

ಅಲ್ಲಾಹನ ಜೊತೆಗಿನ ಸಂಬಂಧದ ಕುರಿತು ಸಹಜವಾಗಿಯೇ ಸತ್ಯವಿಶ್ವಾಸಿಗಳು ಕೆಲವು ಭಾವನೆಗಳನ್ನು ತನ್ನೊಳಗೆ ಇರಿಸಿಕೊಂಡಿದ್ದಾರೆ. “ನಾವು ಪ್ರಾರಂಬಿಸಿದರೆ ಮಾತ್ರ ಅಲ್ಲಾಹನು ನಮಗೆ ನೀಡುತ್ತಾನೆ” ಎಂಬಂತಹ ಒಂದು ಚಿಂತನೆ ಸತ್ಯವಿಶ್ವಾಸಿಗಳಲ್ಲಿರುತ್ತದೆ. ಅದರೆ ಪವಿತ್ರ ಕುರ್‌ಆನಿನ ಕೆಲವು ಉದ್ದರಣೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದಾಗ ಅದು ಈ ತಪ್ಪು ಕಲ್ಪನೆಗಳನ್ನು ನೀಗಿಸಿ ಅಲ್ಲಾಹನ ಅಪಾರ ಅನುಗ್ರಹ ಮತ್ತು ಕರುಣೆಯು ನಮ್ಮ ಎಲ್ಲಾ ಒಳಿತಿನ ಕಾರ್ಯಗಳಿಗೆ ಚಾಲನೆ ನೀಡುತ್ತದೆ ಎಂದು ತಿಳಿದುಬರುತ್ತದೆ.

ಪ್ರೀತಿಯ ಆರಂಭ:

ಓರ್ವ ದಾಸನು ಕಠಿಣ ಪರಿಶ್ರಮದಿಂದ ಅಲ್ಲಾಹನನ್ನು ಪ್ರೀತಿಸಲು ಪ್ರಾರಂಭಿಸಿದಾಗ ಅದರ ಪ್ರತಿಫಲವಾಗಿ ಅಲ್ಲಾಹನು ಮರಳಿ ಆತನನ್ನು ಪ್ರೀತಿಸುತ್ತಾನೆ ಎಂದು ಹೆಚ್ಚಿನವರು ಭಾವಿಸುತ್ತಾರೆ.  ಆದರೆ ಪವಿತ್ರ ಕುರ್‌ಅನ್ ಈ ವಿಚಾರದಲ್ಲಿ ಒಂದು ಸತ್ಯವನ್ನು ಬಹಿರಂಗಪಡಿಸುತ್ತದೆ. ಆಗ ಅಲ್ಲಾಹನ ಪ್ರೀತಿಗೆ ಪಾತ್ರರಾದ ಹಾಗೂ ಅಲ್ಲಾಹನನ್ನು ಪ್ರೀತಿಸುವ ಇನ್ನೊಂದು ಜನ ವಿಭಾಗವನ್ನು ಅಲ್ಲಾಹನು ಸೃಷ್ಟಿಸುವನು.” (ಅಲ್ ಮಾಇದ: 54)

ಈ ವಚನದಲ್ಲಿ “ಯುಹಿಬ್ಬುಹುಮ್” (ಆತನು ಅವರನ್ನು ಪ್ರೀತಿಸುವನು) ಎಂಬ ಕ್ರಿಯೆಯನ್ನು “ವಯುಹಿಬ್ಬೂನಹು” (ಅವರು ಆತನನ್ನು ಪ್ರೀತಿಸುವರು) ಎಂಬ ಕ್ರಿಯೆಗೆ ಮುಂಚಿತವಾಗಿ ಬಂದಿರುತ್ತದೆ. ಇದು ಅಲ್ಲಾಹನು ಮೊದಲು ಪ್ರೀತಿಸಲು ಪ್ರಾರಂಭಿಸುತ್ತಾನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಮ್ಮ ಹೃದಯದಲ್ಲಿ ಅಲ್ಲಾಹನಿಗಾಗಿನ ಪ್ರೀತಿಯ ಬೀಜವನ್ನು ಆತನೇ ಬಿತ್ತುತ್ತಾನೆ. ಆತನ ಔದಾರ್ಯದ ಕಾರಣದಿಂದ ನಮಗೆ ಪುನಃ ಮರಳಿ ಆತನನ್ನು ಪ್ರೀತಿಸಲು ಸಾಧ್ಯವಾಗುತ್ತದೆ.

ಪಶ್ಚಾತಾಪ ಪಡಲು ಇರುವ ಪ್ರಚೋದನೆಯಾಗಿದ್ದಾನೆ:

ಒಂದು ತಪ್ಪು ಮಾಡಿದಾಗ ಪಶ್ಚಾತಾಪ ಪಟ್ಟು ಅಲ್ಲಾಹನತ್ತ ಮರಳುವುದು ಆತನ ದಾಸನ ಕರ್ತವ್ಯವಾಗಿದೆ.  ಆದರೆ ಪಶ್ಚಾತಾಪ ಪಡಲು ಇರುವ ಆಂತರಿಕ ಪ್ರಚೋದನೆ ಅಲ್ಲಾಹನ ಕಾರುಣ್ಯದ ಫಲದಿಂದಾಗಿದೆ ಎಂದು ಕುರ್‌ಅನಿನ ಸೂಕ್ತಗಳು ಸ್ಪಷ್ಟಪಡಿಸುತ್ತದೆ. ನಂತರ ಅವರು ತನ್ನ ಕಡೆಗೆ ಮರಳಿ ಬರಲೆಂದು ಅಲ್ಲಾಹನು ತನ್ನ ಕೃಪೆಯೊಂದಿಗೆ ಅವರ ಕಡೆಗೆ ತಿರುಗಿದನು” (ಅತ್ತೌಬ: 118)

“ತಾಬ ಅಲೈಹಿಂ” (ಆತನು ಅವರ ಕಡೆಗೆ ತಿರುಗಿದನು) ಎಂಬ ಪ್ರಯೋಗ “ಲಿಯತೂಬು” (ಅವರು ಪಶ್ಚಾತಾಪ ಪಡಲಿಕ್ಕಾಗಿ) ಎಂಬುದಕ್ಕಿಂತ ಮುಂಚಿತವಾಗಿ ಬಂದಿರುತ್ತದೆ. ಅಂದರೆ ಓರ್ವನಿಗೆ ಪಶ್ಚಾತಾಪ ಪಡುವ ಮಾನಸಿಕ ಸ್ಥಿತಿ ಮತ್ತು ಅವಕಾಶ ನೀಡುತ್ತಾ ಅಲ್ಲಾಹನು ಮೊದಲು ಆತನ ಕಡೆಗೆ ತಿರುಗುವನು. ಆತನ ಕಾರುಣ್ಯ ಇಲ್ಲದಿರುತ್ತಿದ್ದರೆ, ನಮಗೆ ನಮ್ಮ ಪಾಪಗಳ ಬಗ್ಗೆ ಅರಿವು ಮೂಡಲು, ಆ ಬಗ್ಗೆ ಖೇದವಾಗಲು, ಪಶ್ಚಾತಾಪ ಪಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ತೌಬಾವು ಅಲ್ಲಾಹನ ತೌಫೀಕ್ (ಸಹಾಯ) ಆಗಿದೆ.

ಸಂತೃಪ್ತಿಯ ರೀತಿ:

ಅಲ್ಲಾಹನ ಸಂಪ್ರೀತಿ(ರಿಝಾ) ಗಳಿಸಬೇಕು ಎಂಬುದು ಪ್ರತೀಯೊಬ್ಬ ಸತ್ಯವಿಶ್ವಾಸಿಯ ಅತ್ಯಂತ ಪ್ರಮುಖ ಗುರಿಯಾಗಿದೆ. ಆದರೆ ಪರಸ್ಪರ ಸಂಪ್ರೀತಿಯ ರೀತಿಯು ಗಮನಾರ್ಹವಾದುದು. ಅಲ್ಲಾಹನು ಅವರಿಂದ ಸಂಪ್ರೀತನಾದನು ಮತ್ತು ಅವರು ಅಲ್ಲಾಹನಿಂದ ಸಂಪ್ರೀತರಾದರು.” (ಅಲ್ ಬಯ್ಯಿನ: 8)

ಇಲ್ಲಿಯೂ “ರಲಿಯಲ್ಲಾಹು ಅನ್ಹುಮ್” (ಅಲ್ಲಾಹನು ಅವರಿಂದ ಸಂಪ್ರೀತನಾದನು) ಎಂಬ ಭಾಗವು “ವರಲೂ ಅನ್ಹು” (ಅವರು ಕೂಡಾ ಅವನಿಂದ ಸಂತೃಪ್ತರಾದರು) ಎಂಬುದರ ಮೊದಲೇ ಬರುತ್ತದೆ.  ಅಲ್ಲಾಹನು ಓರ್ವ ದಾಸನಿಂದ ಸಂತೃಪ್ತನಾದನು, ಆತನಿಗೆ ತೌಫೀಕ್(ಸಹಾಯ) ಮಾಡಿದನು.  ಆ ಮೂಲಕ ಆ ದಾಸನಿಗೆ ಅಲ್ಲಾಹನನ್ನು ಸಂತೃಪ್ತಿ ಪಡಿಸುವ ಅಥವಾ ಸಂಪ್ರೀತಗೊಳಿಸುವ ಕರ್ಮಗಳನ್ನು ಮಾಡಲು, ಕೊನೆಗೆ ಅಲ್ಲಾಹನಿಂದ ಆತ ಸಂಪ್ರೀತನಾಗಲು ಸಾಧ್ಯವಾಗುತ್ತದೆ. ಅಲ್ಲಾಹನ ಸಂಪ್ರೀತಿಯೇ ನಮ್ಮ ಸಂತೃಪ್ತಿಯ ಕೀಲಿಕೈಯಾಗಿದೆ.

ಕುರ್‌ಆನಿನ ಈ ಶೈಲಿಗಳು ಎಲ್ಲ ಒಳಿತುಗಳನ್ನು ಒಂದು ಪರಮ ಸತ್ಯದತ್ತ ಕೊಂಡೊಯ್ಯುತ್ತದೆ. ನಮ್ಮ ಬದುಕಿನ ಎಲ್ಲಾ ಒಳಿತುಗಳಿಗೆ, ಪುಣ್ಯ ಕರ್ಮಗಳಿಗೆ ಅಲ್ಲಾಹನು ಈ ಮೊದಲೇ ನೀಡುವ ಕರುಣೆ ಮತ್ತು ಅಪಾರವಾದ ಪ್ರೀತಿಯ ಮೂಲಕ ಚಾಲನೆ ನೀಡುತ್ತದೆ. ಆತನ ಪ್ರೀತಿ, ಪಶ್ಚಾತಾಪ ಪಡಲಿಕ್ಕಿರುವ ಪ್ರಚೋದನೆ, ನಮ್ಮೊಂದಿಗಿರುವ ಸಂತೃಪ್ತಿ ಮುಂತಾದವುಗಳೆಲ್ಲವೂ ನಮ್ಮನ್ನು ಆತನೆಡೆಗೆ ಹೆಚ್ಚು ಹೆಚ್ಚು ಸಮೀಪಿಸಲು ಬೇಕಾಗುವ ಮಾರ್ಗಗಳನ್ನು ತೋರಿಸುವ ದೀಪವಾಗಿದೆ.

 ಆದ್ದರಿಂದ ಈ ಸತ್ಯವು ಓರ್ವ ಸತ್ಯವಿಶ್ವಾಸಿಗೆ ಅತಿ ಮಹತ್ತರವಾದ ನೆಮ್ಮದಿ, ಸಂತೃಪ್ತಿ ನೀಡುತ್ತದೆ. ನಮ್ಮ ಪರಿಶ್ರಮವು ಅಲ್ಲಾಹನನ್ನು ಸಂತೃಪ್ತಿಪಡಿಸುವ ಒಂದು ಕಾರಣ ಮಾತ್ರವಾಗಿದೆ.  ಆದರೆ ಆ ಪರಿಶ್ರಮಗಳು ತನ್ನ ಗುರಿಯತ್ತ ತಲುಪುವುದು ಅಲ್ಲಾಹನು ಅಪಾರವಾದ ಕರುಣೆಯ ಮಳೆ ಸುರಿಯುವ ಕಾರಣದಿಂದಾಗಿದೆ. ನಾವು ಯಾವಾಗಲೂ ನಮ್ಮ ಅಂತರಾಳದಿಂದ ಈ ರೀತಿ ಪ್ರಾರ್ಥಿಸಬೇಕು.  ‘ಅಲ್ಲಾಹನೇ ನೀನು ಪ್ರೀತಿಸಿದ, ನೀನು ಕ್ಷಮಿಸಿದ, ನೀನು ಸಂಪ್ರೀತನಾದ ನಿನ್ನ ಶ್ರೇಷ್ಠರಾದ ಸಜ್ಜನರಲ್ಲಿ ನಮ್ಮನ್ನು ಸೇರಿಸು!”

ಕನ್ನಡಾನುವಾದ: ಅಬೂ ಸಫ್ವಾನ್

Leave a Reply